ಪರ್ವೀನ್ ಪತಿ ವಿದ್ಯುತ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟರು. ಪರ್ವೀನ್ ಅವರಿಗೆ 45 ಲಕ್ಷ ರೂ. ಆರ್ಥಿಕ ಪರಿಹಾರ ದೊರೆಯಿತು, ಅವರ ಮಗಳು ಇದಕ್ಕೆ ನಾಮಿನಿಯಾಗಿದ್ದರು. ಬ್ಯಾಂಕ್ನಲ್ಲಿದ್ದ ಹಣವನ್ನು ತನ್ನ ಪ್ರಿಯತಮನಿಗೆ ಆಗಾಗ್ಗೆ ನೀಡುತ್ತಿದ್ದಳು. ಈ ವಿಚಾರವು ಪರ್ವೀನ್ಗೆ ತಿಳಿದು, ಪ್ರಶ್ನಿಸಿದ್ದರು. ಐಷಾರಾಮಿ ಜೀವನಕ್ಕೆ ಅಡ್ಡವಾಗಿದ್ದ ತಾಯಿಯನ್ನು ಮುಗಿಸಿ, ಸರ್ಕಾರಿ ಹುದ್ದೆ ಅನುಕಂಪದ ಆಧಾರದಲ್ಲಿ ಸಿಕ್ಕ ಹಣ ಪಡೆದು ಅದ್ದೂರಿ ಜೀವನ ನಡೆಸಲು ಇಬ್ಬರು ನಿರ್ಧರಿಸಿದರು.